Tuesday, November 10, 2009

ವರ್ಣನೆ......


ರೂಪದ ವರ್ಣನೆಯು ನಿನಗಲ್ಲ ಗೆಳತಿ
ಪ್ರೇಮದ ವರ್ಣನೆಯು ಬೇಕಿಲ್ಲ ಗೆಳತಿ
ಹೃದಯಗಳ ವರ್ಣನೆಯು ತಿಳಿದಿಲ್ಲ ಗೆಳತಿ
ಕವಿತೆಗಳ ವರ್ಣನೆಯು ಅರಿವಿಲ್ಲ ಗೆಳತಿ
ನನಗೆ ತಿಳಿದಿರುವುದೊಂದೆ ಅದೇ ನಿನ್ನ ಪ್ರೀತಿ.....

ನಿನ್ನ ನೆನಪುಗಳೇ ಹಾಗೆ......


ನಿನ್ನ ನೆನಪುಗಳು ನನ್ನ ಜೀವನದಲ್ಲಿ
ಸದಾ ಹರಿವ ಜೀವ ನದಿಯಂತೆ
ಭೂ ಗರ್ಭದಲ್ಲಿ ಹುದುಗಿರು ಅಂತರ್ಜಲದಂತೆ
ನಿನ್ನ ನೆನಪುಗಳೇ ಹಾಗೆ ಹರಿವ ನೀರಂತೆ......

ತಾವರೆ..........


ಶಾಂತವಾಗಿದ್ದ ಮನದ ಕೊಳವನ್ನು
ಯಾರೋ ಕಲಕಿದಂತಾಗಿತ್ತು
ಆಗ ತಾನೆ ಅರಿವಾಯ್ತು ನೀನೆಂದು
ಆಗ ತಿಳಿಯದೊಯ್ತು ಇದು ಕನಸೆಂದು.......

ಪ್ರೇಮ ಸೆರೆ......


ಚಂದ್ರನ ಬೆಳದಿಂಗಳಿಗಿಂತಲು ಬಲು ಚೆಲುವೆ
ಕರೆದಳು ನನ್ನನ್ನು ಅವಳ ಕಣ್ಣಲ್ಲೆ
ಕೂಗಿದಳು ಮೋಹಕ ನಗೆಯಲ್ಲೆ
ಬಂದಿಯಾದೆ ನಾ ಪ್ರೇಮ ಸರೆಯಲ್ಲೆ.......

ಮರೆಯಾಗಿ.........


ಮನಸ್ಸೆಂಬ ಬಾನಿಗೆ
ಪ್ರೀತಿಯೆಂಬ ಮಂಜು ಕವಿದು
ಹೃದಯದ ಭೂಮಿಗೆ ತಣ್ಣನೆ ಮಳೆಗರೆದು
ಜೀವನವ ಹಸಿರಾಗಿಸದೆ
ಮರೆಯಾಗಿ ಹೋದೆಯ

ರೋದನ....


ಮಾತು ಮಾತಲ್ಲೇ ಮೌನ
ಮರೆತೋಯ್ತು ಗಮನ
ಶುರುವಾಯ್ತು ಕವನ
ನೆನಪಾಯ್ತು ಜೀವನ
ಅಲ್ಲಿಂದಲೇ ಈ ರೋದನ.....

ಪ್ರೇಯಸಿ..............


ಪ್ರೇಯಸಿ ನೀ ಪ್ರೀತಿಸಿ
ನನ್ನನ್ನು ನಕ್ಕು ನಲಿಸಿ
ಮನ ಬಂದಂತೆ ಆಡಿಸಿ
ಮರೆತು ದೂರಾದೆ ನನ್ನ ಹೃದಯ ಬಾರವಾಗಿಸಿ.......

ಬಾಳ ಸಂಗಾತಿ..............


ಚೆಲುವೆಯೋರ್ವಳ ಕಂಡೆ
ಪ್ರೀತಿಸಿದೆ ಪೂಜಿಸಿದೆ
ನನ್ನ ಬಾಳ ಗುಡಿಯಲ್ಲಿಟ್ಟು ಆರಾದಿಸಿದೆ
ಕವಿತೆಗಳ ಮಳೆಯನ್ನೆ ಸುರಿಸಿದೆ
ಇವಳು ನನ್ನ ಬಾಳ ಸಂಗಾತಿ ಯಾದರೆ ಅಂದು ಕೊಂಡೆ....

Monday, November 9, 2009

ಪ್ರೀತಿಯ ಜಗಳ....


ನನ್ನವಳು ಕಡಲು
ನಾನು ಕಡಲ ತೀರ
ಎಷ್ಟೇ ರಭಸವಾಗಿ
ನನ್ನೆದೆಗೆ ಅಪ್ಪಳಿಸಿದರು
ಕೋಪವಿಲ್ಲ ನನಗೆ
ಏಕೆಂದರೆ ನಮ್ಮದು ಪ್ರೀತಿಯ ಜಗಳ........

ನಾನು ನಾನಾಗಿರಲಿಲ್ಲ.......


ನೀ ಹೇಗೆ ಬಂದೆ ಗೊತ್ತಿಲ್ಲ
ನೀ ಬಂದ ಸಮಯ ತಿಳಿದಿಲ್ಲ
ನೀ ಮೊದಲು ಹೊಮ್ಮಿಸಿದ ಕವಿತೆ ನನ್ನಲಿಲ್ಲ
ನೀ ಕೊಟ್ಟ ನೆನಪ ನಾ ಮರೆತೆನಲ್ಲ
ನೀ ಯಾರೆಂದು ತಿಳಿವ ಮುನ್ನ ನಾನು ನಾನಾಗಿರಲಿಲ್ಲ.......

ಗೆಳತಿ ಯಾರು ನೀನು......


ಕಣ್ಣೇದುರಿಗೆ ಬಂದೆ
ಮನಸ್ಸಲ್ಲಿ ಇಳಿದೆ
ಕನಸ್ಸಲ್ಲಿ ಬರಹತ್ತಿದೆ
ಭಾವನೆಯಾಗಿ ಹೊರ ಬಂದೆ
ಗೆಳತಿ ಯಾರು ನೀನು.....

ಬರಡಾದ ಜೀವನಕ್ಕೆ
ಮಳೆ ಹನಿ ನೀ ತಂದೆ
ಜಡವಾದ ಬದುಕಿಗೆ
ನವಚೈತನ್ಯವ ತುಂಬಿದೆ
ಕಲ್ಲಾದ ಈ ಮನವ
ಹೂವಂತೆ ಹರಳಿಸಿದೆ
ಗೆಳತಿ ಯಾರು ನೀನು......

ಸೂರ್ಯ ಕಿರಣವ ಚುಂಬಿಸಿ
ತಾವರೆ ಅರಳಿದಂತೆ
ನನ್ನದೆಯಲಿ ಅರಳಿದೆ
ಹುಣ್ಣಿಮೆ ರಾತ್ರಿಯಲಿ
ಬಾನಿಗೆ ಚಂದಿರ ಬಂದಂತೆ
ಬದುಕಲ್ಲಿ ನೀ ಬಂದೆ
ಗೆಳತಿ ಯಾರು ನೀನು......

Thursday, October 29, 2009

ಮರಳಿ ಬಾ ವಸಂತವೇ..


ನೆಡವದಾರಿ ಮುಳ್ಳಾಗಿದೆ
ನೆಡವಪಾದ ಸೋತು ಹೋಗಿದೆ
ಬಿಸಿಲು ಬೆಂಕಿಯಂತೆ ಉರಿಯುತ್ತಿದೆ
ಬಿಸುವ ತಂಗಾಳಿ ಬಿರುಗಾಳಿಯಾಗಿದೆ
ಗಿಡ ಮರಗಳು ಬಾಡಿ ಸೊರಗುತ್ತಿವೆ
ಹಾಡುವ ಕೋಗಿಲೆ ಮಂಕಾಗಿದೆ
ವಸಂತಕ್ಕಾಗಿ ಅಂಬಲಿಕೆ ಹೆಚ್ಚಾಗಿದೆ

ಬರಡಾದ ಭೂಮಿ ಬಿರುಕು ಬಿಡುವ ಮುನ್ನ
ಹಸಿರೊತ್ತ ಪೈರು ಬಾಡಿ ಹೋಗುವ ಮುನ್ನ
ಉಸಿರು ನಿಂತು ದೇಹ ಮಣ್ಣಾಗುವ ಮುನ್ನ
ಬದುಕು ಮರೆಯಾಗಿ ಕಣ್ಣು ಮಂಜಾಗುವ ಮುನ್ನ

ಅಮೃತ ಬಿಂದುವಿನಂತೆ ಬಾ... ಧರೆಗೆ
ಜೀವ ಜಲದಂತೆ ಸುರಿ...ಇಳೆಗೆ
ಚೈತನ್ಯದ ಸೆಲೆಯಾಗಿ ಬಾ...ಬಾಳಿಗೆ
ಮರಳಿ ಬಾ..ವಸಂತವೇ..ಮತ್ತೆ ಮರಳಿ ಬಾ........

ಮನದ ಮುಂಗಾರು


ನವ ಮುಂಗಾರಿನಂತೆ ಮಧುರವಾಗಿ ಬಂದೆ
ಗುಡುಗು ಸಿಡಿಲಿನಂತೆ ಅರ್ಭಟಿಸಿ ಮಿಂಚಿ ಮರೆಯಾದೆ.....

ಕಣ್ಣಿಗೆ ಕಾಣುವ ಮೊದಲು ಮನದ ಹೊಸ್ತಿಲ ದಾಟಿ ಬಂದೆ
ಭಾವ ಸರೋವರಕ್ಕೆ ಕಲ್ಲೇಸೆದು ನೆನಪಾಗಿ ದೂರ ಹೋದೆ....

ಬರುವಾಗ ಸೋನೆಯಾಗಿ ಬಂದೆ
ಹೋಗುವಾಗ ರಭಸವಾಗಿ ಸುರಿದು ಬಂದನಕ್ಕೆ ಸಿಗದೆ ಕೊಚ್ಚಿ ಹೋದೆ...

ಕಾಮನ ಬಿಲ್ಲಂತೆ ಕಣ್ಣಿಗೆ ಕಂಡೆ
ಕಣ್ಣಲ್ಲಿ ನಿಲ್ಲುವ ಮೊದಲೆ ಕಾಣದೆ ಕರಗಿ ಹೋದೆ.....

ಹಿಡಿಕೆಯಷ್ಟಿರುವ ಹೃದಯಕ್ಕೆ ನೀ ಗಾಯವ ಮಾಡಿದೆ
ಅದು ವಾಸಿಯಾಗುವ ಮೊದಲೆ ನೀ ಕಣ್ಮರೆಯಾದೆ.......

Tuesday, October 27, 2009

ಜೀವ ಸಖಿ.......



ಮರೆಯಲಾರದ ನೆನಪು ತಂದವಳೆ..
ಮರೆಯಲಾರೆನು ನಿನ್ನ ನಾನು.....

ನಲಿವಿಗೂ ಮಿಗಿಲಾಗಿ ನೋವು ತಂದವಳೆ..
ತೊರೆಯಲಾರೆನು ನಿನ್ನ ನಾನು...

ಕನುಸುಗಳ ಕಲ್ಪನೆಗಳ ತಂದವಳೆ..
ನನಸಾಗುವವರೆಗೂ ಬಿಡೆನೂ ನಾನು....

ನಿನದು....


ಈ ಜೀವಾ ನಿನದು..
ಈ ಜೀವನವು ನಿನದು....

ಈ ಹೃದಯ ನಿನ್ನದು..
ಈ ಹೃದಯದ ಬಡಿತವು ನಿನದು...

ಈ ಚಿತ್ತವು ನಿನ್ನದು..
ಈ ಚಂಚಲವು ನಿನದು...

ಈ ಪ್ರೀತಿ ನಿನದು..
ಈ ಅನುರಾಗವು ನಿನದು...
ಈ ಮಾತು ನಿನದು..
ಈ ಮೌನವು ನಿನದು...

Monday, October 26, 2009

ಕಲ್ಪನ.......


ಮನೆಸ್ಸೆಂಬ ಆಕಾಶದಲ್ಲಿ ಭಾವನೆಗಳೆಂಬ ಕಾರ್ಮುಗಿಲು ಕವಿದು
ಅಕ್ಷರಗಳೆಂಬ ಮಳೆಯಾಗಿ ಸುರಿದು
ಸಾಲುಗಳೆಂಬ ಮಳೆಯಾಗಿ ಹರಿದು
ಸಂಗ್ರಹ ಎಂಬ ಸಾಗರ ಸೇರಲು
ಓಡೋಡಿ ಬರುತಿಹವು
ನಿಲ್ಲಿಸಬೇಡಿ ಅವುಗಳನ್ನು ತಡೆದು
ಅವು ಹರಿಯಲಿ ಕವನಗಳಾಗಿ.

ಮಾಯೆ.............



ಬರಡಾದ ನನ್ನೆದೆಯ ಮೇಲೆ
ಮಳೆ ಹನಿ ಕರೆದೆ ಏಕ?

ಅಲ್ಲಿ ಪ್ರೀತಿಯ ಬೀಜವ ಬಿತ್ತಿ
ಮರವಾಗಿ ಬೆಳೆಸಿದ್ದು ಏಕೆ?

ಪ್ರೀತಿ ಫಲ ಕೊಡುತ್ತದೆ ಎಂದು ಕೊಂಡಾಗ
ಕರುಣೆಯಿಲ್ಲದೆ ಕಡಿದು ಹಾಕಿದ್ದು ಏಕೆ?

ಇಂದಿಗೂ ನಿನ್ನ ಮಾಯೆ
ನನಗೆ ತಿಳಿದಿಲ್ಲವೇಕೆ?